ಉಸಿರಿನ ಉಸಿರು
ಖಾಸ್ಗತ
ತಾಳಿಕೋಟಿ ನಾಡಿಗೆ
ಬೆಳಕಾಗುವುದು
ಖಾಸ್ಗತನ ಹೆಸರನು
ನೆನೆದಾಗ !
ಶಾಶ್ವತವಾಗಿ
ನೆಲೆನಿಂತಿರುವ
ಆಬಾಲ ವೃದ್ಧರ
ಮನದಾಗ !
ಜೀವದ ಜೀವ ಉಸಿರಿನ
ಉಸಿರು
ಖಾಸ್ಗತನೆಂಬುದು
ಅಭಿದಾನ !
ಮನೆ ಮನೆ ಮನೆಗೂ
ಮನಸಿನ ಮೊನೆಗೂ
ಈತನ ನಾಮವೆ
ಸುಯಿಧಾನ !
ದೇಶವ ತಿರುಗಿ
ಕೇಶವನೋದಿ
ಏರಿದ ಅರಿವಿನ
ಎತ್ತರಕೆ !
ಪುರಾನ ಪ್ರವಚನ
ಅನುಭವ ಸಿಂಚನ
ಜಡಜೀವನದ ಚೇತನಕೆ !
ಆಟ ಹುಡುಗಾಟ
ನಾಟಕವನಾಡುತ
ರಂಜನೆ ನೀಡಿದ
ಜನಮನಕೆ !
ಆಡುತ ಹಾಡುತ ಬೀದಿಯ
ಅಲೆದು
ತತ್ವವ ಸಾರಿದ
ಲೋಕಕ್ಕೆ !
ಹಸುಗೂಸಾಗಿ ಬೇಡಿದ
ಕಾಡಿದ
ಸಜ್ಜನ ಬಸಮ್ಮ
ತಾಯೀಗೆ !
ದೀಕ್ಷೆಯ ನೀಡಿ
ದಾರಿಯ ತೋರಿದ
ಪಡೇಕನೂರಿನ
ಭಕ್ತನಿಗೆ !
ಭಿಕ್ಷಪ್ಪಯ್ಯನ
ಗದ್ದುಗೆಯಲಿ
ಮಾಡಿದನು ದಿನ
ಶಿವಧ್ಯಾನ !
ನಮಾಜು ಮಾಡಿ
ಆಚ್ಚರಿಗೊಳಿಸಿದ
ಪ್ರೀತಿಯ ಮುಸ್ಲಿಂ
ಬಂಧುಗಳನ !
ಸಿದ್ಧಾರೂಢರ
ಒಡನಾಡಿಯಾಗಿ
ಲೋಕೋತ್ತರ ನಡೆ
ನಡದಾನ !
ರಟಗಲ್ಲ ಶ್ರೀಗಳ
ಮೆಚ್ಚುಗೆ ಗಳಿಸುತ
ಲಿಂಗಪೂಜೆಯ
ಮಾಡ್ಯಾನ !
ಶಾಖಾ ಮಾಠಗಳ ಸಿರಿಸಂಪದವನು
ಆ ಊರವರಿಗೆ
ಒಪ್ಪಿಸ್ಯಾನ !
ಬರಗಾಲದಲ್ಲಿ ದಾಸೋಹ
ನಡೆಸಿ
ಬಡವರ ಸೇವೆಯ ಗೈದಾನ
!
ಮೂರೇ ದಿನದ ಸಂತೆಯ
ಬದುಕಿಗೆ
ಸಾರ್ಥಕ ರೂಪವ
ನೀಡ್ಯಾನ !
ಮೂವತ್ಮೂರೇ
ವರ್ಷಗಳಲ್ಲಿ
ಅದ್ಭುತ ಸಾಧನೆ
ತೋರ್‍ಯಾನ !
೦೫.೦೯.೨೦೧೨
No comments:
Post a Comment