ಲೇಸಾದ
ಅರಿವು
ನೀಡೆಮಗೆ
ಖಾಸಗತ
ನಿನನಾಮ ಏಸೊತ್ತ ನೆನೆಯಲಿ
ಸಾಸವತ
ನನ್ನ ನಾಲ್ಗ್ಯಾಗ | ನೆಲದೈತಿ
ವಿಸ್ವಾಸ್ದಿ
ಕಾಯೊ ಅಭಿಮಾನ |
ಮನೆಯಾಗ
ನೆಲಸೀದಿ ಮನದಾಗ ಸುಳಿತೀದಿ
ಗುಣದಾಗ
ರೂಪ ತಾಳತೀದಿ | ಅನುಭಾವ್ದ
ಕಣದಾಗ ರಾಶಿ
ಮಾಡತೀದಿ |
ಹೆಸರಾಯ್ತು
ಖಾಸಗತ ಉಸಿರಾಯ್ತು ಸಾಸವತ
ಖುಷಿಯಾಯ್ತು
ಜಗವು ನಿನ್ನಿಂದ | ತಿಪ್ಪಲಕೆ
ಬಿಸಿಯಾದ
ಮನ್ಸು ತಂಪಾಯ್ತು |
ಕೆಸರಾದ ಮನ್ಸು ತಿಳಿಯಾಯ್ತು |
ಹೆಚ್ಚೇನು
ಹೇಳಲಿ ನೆಚ್ಚೀನಿ ನಿನಪಾದ
ಹುಚ್ಚನ್ನು
ಬಿಡಿಸಿ ಕಾಪಾಡು | ಬದುಕಲ್ಲಿ
ಕೆಚ್ಚನ್ನು ತುಂಬಿ ಹೋರಾಡ್ಸು |
ಗುಟ್ಟೀನ
ಮಾತಿದು ನೆಟ್ಟಗ ಹೇಳತೀನಿ
ಗಟ್ಯಾಗಿ
ನೆಲಸು ಮನದಾಗ | ಖಾಸಗತ
ಪಟ್ಟಾಗಿ
ಕಾಯ್ದು ಕರುಣಿಸೊ |
ಕಲ್ಲು
ಕಲ್ಲಿನ ಮ್ಯಾಲ ಹುಲ್ಲು ಹುಲ್ಲಿನ ಮ್ಯಾಲ
ಚಲ್ಲುವರದೈತಿ
ನಿನ್ನೆಸರು | ಹಬ್ಬುತ್ತ
ಸೊಲ್ಲಾಯ್ತು
ಜಗದ ಒಡಲೊಳಗ |
ತಳಕೋಟಿ
ಊರಿದು ಕಳಕೋತು ಕಪ್ಪಕಲೆ
ಬೆಳಕೋತ
ಬಂತು ನಿನ್ನಿಂದ | ಖಾಸಗತ
ಬೆಳಕಾಯ್ತು
ನಮ್ಮ ನಾಡಿಗೆ |
ಅನ್ನ
ಕೊಟ್ಟವ ನೀನು ಚಿನ್ನಕೊಟ್ಟವ ನೀನು
ಬೆನ್
ಬಿದ್ದ ನನ್ನ ಕಾಪಾಡಿ | ಖಾಸಗತ
ಬಣ್ಣ
ಕೊಟ್ಟೀದಿ ಮರಿಲೆಂಗೊ |
ಶಂಭುಹರ
ನೀನೆಂದು ನಂಬಿಹುದು ನಾಡೆಲ್ಲ
ಸಾಂಬಶಿವನಾಗಿ
ಕಾಪಾಡೊ | ಖಾಸಗತ
ಹುಂಬರ
ಮ್ಯಾಳ ಮರಿಲಾರ್ದ |
ಆಟವ ಆಡ್ಸೀದಿ ಕೂಟವ ಕೂಡ್ಸೀದಿ
ನಾಟಕವಾಡಿ ನಲಿಸೀದಿ | ಖಾಸಗತ
ಮಾಟದ
ಬದುಕು ತೋರ್ಸೀದಿ |
ಬಕುತಿಯ
ಬೆಳಸೀದಿ ಯುಕುತಿಯ ಕಲಿಸೀದಿ
ಬಕುತ
ಮಾರ್ಕಂಡ ಆಟವ | ರಚಿಸೀದಿ
ಮುಕ್ತಿಯ
ದಾರಿ ತೋರ್ಸೀದಿ |
ಜ್ಯೋತಿಯಲಿ
ಖಾಸಗತ ಖ್ಯಾತಿಯಲಿ ಖಾಸಗತ
ಸೋತುಸೊರಗಿದ
ಕಾಲಕ್ಕ | ಕೈಹಿಡದು
ಮಾತನ್ನುಳಿಸೀದಿ
ಮಾದೇವ |
ಅಕ್ಕರದ
ಮಾತಲ್ಲಿ ಸಕ್ಕರೆಯ ನಡೆಯಲ್ಲಿ
ನಕ್ಕವರ
ನಗೆಯ ಬೆಳಕಲ್ಲಿ | ಖಾಸಗತ
ಹೊಕ್ಕಿರುವ
ಬಗೆಯು ಬೆಡಗಾಯ್ತು |
ಮೊದಲೀಗೆ
ಕೈಮುಗಿದು ತೊದಲೀನ ನುಡಿಗಳನು
ಹದಮಾಡಿ
ಬಿತ್ತಿ ಬೆಳೆದಿರುವೆ | ನಾಲಿಗ್ಯಾಗ
ಸದರೀಲೆ
ಕಾಯೊ ಖಾಸಗತ |
ಆಸತ್ರು
ನೀನಿರುವೆ ಬ್ಯಾಸತ್ರು ನೀನಿರುವೆ
ತ್ರಾಸಿನಲಿ
ಸಿಕ್ಕು ನರಳ್ವಾಗ | ಖಾಸಗತ
ಲೇಸಾದ
ಅರಿವು ನೀಡೆಮಗೆ |
ಚಣಹೊತ್ತು
ನೆನದರ ಅಣುಮಾತ್ರ ಪಾಪಿಲ್ಲ
ಅನುದಿನ
ನೆನೆದು ಪಾರಾಗೊ | ಸೂತರವ
ಮನದಾಗ
ತುಂಬೊ ಖಾಸಗತ |
ಮುಂಜಾನೆ
ನೆನೆದರ ಅಂಜಿಕೆ ಹರಿವೂದು
ಸಂಜೀಕ
ಧ್ಯಾನ ಮಾಡಿದರ | ಬದುಕಿನ
ನಂಜೀನ
ಪದರು ಹರಿವೂದು |
ಹೂವಿನ
ಬಕುತಿಗೆ ನೋವೆಲ್ಲ ದೂರಾಯ್ತು
ಹಾವಿನ
ನಂಜು ಬಯಲಾಯ್ತು | ಖಾಸಗತ
ಸಾವಿನ
ನಂಟು ತಪ್ಪೊಯ್ತು |
ಅರಿಯುವ
ತಿಳಿವನ್ನ ಮರೆಯುವ ಮಾತನ್ನ
ಪಿರುತಿಂದ
ಉಣಿಸೊ ಅನುದಿನ | ಖಾಸಗತ
ಹರನಾಮ
ಉಂಡು ಬೆಳೆವೇನೊ |
ಬೇವಿನ
ಹಣ್ಣೀಗೂ ಮಾವಿನ ಪರಿಮಳ
ಹ್ಯಾವಿಗೆ
ಬಿದ್ದು ನೆನೆದರ | ನಿನನಾಮ
ಸಾವಿಗೆ
ಸದರ ಕಟತೈತಿ |
ಅರಿವಿನ
ಖಾಸಗತ ಗುರುವಿನ ನೆನಿಬೇಕೊ
ಮರೆಯದ
ಮಾತ ತಿಳಕೊರೊ | ಪದರಾಗ
ಬಿರಿಯಾಗಿ
ಕಟ್ಟಿ ನಡಿಬೇಕೊ |
*****
೨೪-೦೯-೨೦೧೩